Sunday 26 March 2023

ಅಲ್ಬಾಮ್



ತೀರದಲ್ಲಿ ಕುಳಿತುಕೊಂಡು ಕಟ್ಟಿದೆವು 
ಒಲವಿನ ಅರಮನೆಯನು.........
ಅಲೆಯೊಂದು ಅಪ್ಪಳಿಸಿ ಮರೆಯಾಯ್ತೆ ಈಗ
ಮರಳಿನ ಆಟವಾಯ್ತೆ‌..... ನಮ್ಮ ಪ್ರೀತಿಯು....

ಅನುದಿನ ...... ಅಲೆಯುತ.......
ಒಂದಕ್ಕೊಂದು ಬೆರೆತವು ಮುಗ್ದ‌ಮನಗಳು
ನೀನನಗೆಂದು ನಾ...ನಿನಗೆಂದು..
ಕೂಡಿಕಳೆಯುತ ಮರೆಯುತ ನೂರು ನೋವನು
ಈಗಿರುವಾಗ ಅನುರಾಗ....
ಯಾಕೆ ಶುರುವಾಯ್ತು ಈ ಶೋಕರಾಗ.....

ಇದ್ದರು ವ್ಯರ್ಥವನಿಸಿದೆ ಜೀವವು
ಬರಿದಾಗಿ ಬತ್ತಿ ಹೋಗಿದೆ ಭಾವವು
ತಂದು ಹೃದಯಕೆ ನೂರೆಂಟು ನೋವನು
ಕಾಣದಾಗಿದೆ ಹೃದಯ ಇದಕೆ ಮದ್ದನು
ಅನುಭವಿಸುವೆ ಅನುಗಾಲವು....
ಶಾಪವಾಗಿ ಬಂದ ಒಲವನೂ



ಹುಡುಕುತ್ತಿವೆ‌....ಕಣ್ಣುಗಳು
ನಿನ್ನೇ...ನಿನ್ನೇ....ನಿನ್ನನು
ಸುರಿಯುತ್ತಿವೆ ಕಣ್ಣ ಹನಿಗಳು
ನಿನ್ನೇ..ನಿನ್ನೆ ....ನೆನದು ||ಪ||

ಓ..ಜೀವವೇ....ಬಿಡನೆಯೆಂದು
ನೂರುಮಾತು ಕೊಟ್ಟೆ ಅಂದು
ಹೇಳದೆಯೇ ಕೇಳದೆಯೇ..
ಮರೆಯಾಗಿ ಹೋದೇ..ಇಂದು...

ನಾನೊಂದು ಬೆಂದೆನು ಮರುಳಾಗಿ ಹೋದೆ
ಮನವೆಲ್ಲ ಬರಿದಾಗಿ ಬಳಲಿ ಬೆಂಡಾಗಿದೆ
ಸುಡುತಿದೆ ವಿರಹಾಗ್ನಿ ನೀಬೇಕೆಂದು
ಬಿಡದೆ ಬಂದು‌ ಬರದೀ ಸೇರು ನನ್ನನು......||ಪ||



ಎಲ್ಲಾ..ಎಲ್ಲೆಯ ಮೀರಿ..
ಎಲ್ಲಿ.... ಹೊಂಟಿಯಲ್ಲೆ...
ಎಷ್ಟೂ ಸಾಗಿದರು
ಮುಗಿಯದ...ಹಾದಿಯಲ್ಲೆ

ಮಮತೆಯ ಕಡಲು ತಾಯಿಯ ಮಡಿಲು
ಅಪ್ಪನ ಅಕ್ಕರೆ ಮುಗಿಯದ ಮುಗಿಲು
ಎಲ್ಲವ ಬಿಟ್ಟು ಯಾವ ತೀರವ ಸೇರಲೆ........

ಬಾಲ್ಯದ ಗೆಳೆಯ ಬಾಲ್ಯದ ಗೆಳತಿ....
ಆಡಿದ ಆಟ ಮಾಡಿದ ಆ ತುಂಟಾಟ
ಹೇಗೆ ತಾನೆ‌‌ ಮರೆಯಲೆ..........

ಒಲವೊಂದು ಲವಲವಿಕೆ
ಅದು ಬೇಕೆಂಬುದು ನನ್ನ ಅರಿಕೆ
ಎಲ್ಲಾರಿಗೂ ಇದರ ಕನವರಿಕೆ
ಟಾನಿಕೂ ಜೀವ ಜೀವಕೆ.....

ಎಳೆಯ ಮನಮನಕೆ 
ತಂದೆಯ ತಾಯಿಯ ಹೃದಯವೆ
ಒಲುಮೆಯ ಗರಡಿಮನೆ


ನೀನೆ....ನನ್ನ ಸಿಂಗಾರ...
ನಿನ್ನ ನೆನಪೆ ಬಂಗಾರ....
ಕೂಡಿ ಬಾಳುವ ನಿರ್ಧಾರ..
ನಮಗೆ ಒಲವೆ ಆಧಾರ ||ಪ||

ಎಲ್ಲೋ ಹುಟ್ಟೋ.. ನದಿಯೊಂದು
ಸಾಗರ ಸೇರೋ..ಆತುರ
ಎಲ್ಲೋ ಬೆಳೆದ ನಾವಿಂದು
ಸಂಗಮವಾದೆವು ಸುಮಧುರ

ವಸಂತ ಮಾಸದ ಚಿಗುರೊಂದು
ಕೋಗಿಲೆ ಕೂಗಿತು ಅತಿ ಮಧುರ
ಜೀವನವೊಂದು ಸುಂದರ 
ಅದೇ ಒಲವಿನ ಮಂದಾರ.


ಅಲೆಮಾರಿ ಜೀವನವಿದು...
ಅಲೆಯೋ ಅಲೆಯೋ ಅಲೆಯೋ ಅಲೆಯೋ....
ಗೊತ್ತು‌ ಗುರಿಯು ತಿಳಿಯದಾಗಿದೆ
ಮನದ ಮಂಪರು ಬಿಡದಾಗಿದೆ
ಅಲೆಯೋ ಅಲೆಯೋ ಅಲೆಯೋ ಅಲೆಯೋ....

ಹುಟ್ಟಿದ ಊರು ಒಂದು
ಅಲೆದ ಊರು ನೂರೊಂದು
ಕರ್ಮವು ನಮದು‌ ಧರ್ಮವು‌ ನಮದು
ನಾಲಿಗೆ ತಪ್ಪಿ ನಡೆಯದ ನಾವು
ಸತ್ಯವೇ ಮನೆಯ ದೇವರು ಎಂದು
ಎಲ್ಲರನ್ನು ನಮ್ಮವರೆಂದು 
ಕೂಡಿಬಾಳೋ ಮನುಜರು ನಾವೂ.....

ಕಾಯವೇ ನಮದು ಕಾಯಕ ದೇವರು
ಭಾರತ ಮಾತೆ‌ ಕನ್ನಡದಾತೆ
ಊರುರು ಅನ್ನವು ತುಂಬಿದೆ ಅಣ್ಣ
ತೆರೆಯೋ ನೀನು ಜಗದ‌ ಕಣ್ಣ
ಒಲವೆ ಜೀವದ ಸಾಕ್ಷಾತ್ಕಾರ
ಒಲವಲಿ ಒಲವಾಗಿ‌ ಬಾಳೋಣ ........















Monday 2 January 2023

ಪಯಣ

         ಪಯಣ

ಟವಿ ಮುಂದ ಕುಂತಿದ್ದೆ
ಮನ್ಯಾಗ ಇದ್ದ ಹುಡುಗ
ಗಳಗಳ ಅಳಾಕತ್ತಿತ್ತು
ಮನಿ ಹೆಣ್ಮಕ್ಳೆಲ್ಲಾ ಕಣ್ಣೀರು 
ಹಾಕಕತ್ತಿದ್ದ್ರು ಎದುಕಂದ್ರೇನು
ದಾರಾವಾಹಿಯೊಳಗಿನ ನಾರಿ
ಬಿಟ್ಟುಬಿಡ್ದಾ ದು:ಖಸ್ತಿದ್ಳು
ವ್ಹಾವ್ಹಾ ಎಂತಾ ಜಗತ್ತು ಅಂತೀನಿ
ರೀಲ್ ಗಿದ್ದ ಬೆಲೆ ರೀಯಲ್ಲಗಿಲ್ಲ
ಬೆಲ್ಲದಂತ ಮಾತು ಬೆಲ್ಲದಂತ ಜನ
ಕಲ್ಲಾಗಿ ಕುಂತಾರ
ಏನಿದ್ದ್ರೂ ಅಕ್ಕರೆ ಇಲ್ಲದ ಸಕ್ಕರೆ ಮಂದಿ
ಬರಬಾರದ ಬಂದು
ಇರಬಾರದ್ದು ಇದ್ದು
ಬಿಡಬಾರದ್ದು ಬಿಟ್ಟು 
ಹಿಡಿಬಾರದ್ದು ಹಿಡಿದು
ಕುಡಿಬಾರದ್ದು ಕುಡುದು
ತೊಡಬಾರದ್ದು ತೊಟ್ಟು
ನೋಡುಬಾರದ್ದು ನೋಡಿ
ಮಾಡಬಾರದ್ದು ಮಾಡಿ
ಕಾಲದ ಮಾಯೆಯ‌
ಕಸಬರಗಿಯಾಗಿ 
ಯಾವುದ ಗೂಡಿಸಲಿ 
ಯಾವುದ ಬಳಿಲಿ
ಮುಗಿಯದ ಕಸವನು
ಕೀಳಲು ಹೊರಟ 
ಕೋಡಂಗಿ ಬಾಳಲಿ
ಬಂದ ಬಾಳೆಲೆಯಲಿ
ಬಂದುದ ಉಂಡು
ಹುರುಪಿಲೆ ಬದುಕ ಪಯಣ
ಭರವಸೆಯಲಿ ಸಾಗಿಸಿ
ನಾಕಕೆ ಕೈಚಾಚೊ ನರಮಾನವ

                            --  ಲಕ್ಷ್ಮೀಸುತ

 

ಬೇಕು.....

         ಬೇಕು,,...

ಬಾಳಬೇಕು ಬಲಿಬೇಕು 
ತಿಳಿಬೇಕು ತಾಳಬೇಕು
ತಲಿಬೇಕು ತೊಳಿಬೇಕು
ಜನವರಿತು ಧನಿಅರಿತು
ಜಗವಾಗಬೇಕು ಯುಗದ ಮರ್ಮವರಿಬೇಕು

ಸುವಿಚಾರ ಜಿನುಗಬೇಕು
ಜೀಕಬೇಕು ಏಕಬಾಕು
ಕಷ್ಕದಲಿ ತೇಕಬೇಕು 
ಒಲವುಬೇಕು ಗೆಲುವುಬೇಕು
ಏನಿದ್ರು ಜ್ವಾಕಿಬೇಕು

ಮುನಿಸುಗಿನಿಸು ತೆಗೆದು ಹಾಕಬೇಕು
ಕರಗಬೇಕು ಬೆರಿಬೇಕು
ತಿರುಗಬೇಕು ತೆವಳಬೇಕು
ತಿಳಿತಿಳಿದು ತಿಳಿಯಾಗಬೇಕು
ಬಿದ್ದುಬಿದ್ದು ಎದ್ದು ನಿಲ್ಲಬೇಕು

ಬೇಕುಬೇಕುಗಳ ಬದುಕಲಿ
ಜೀಕಬೇಕು ಈಜಬೇಕು
ದಡಬರಸಿ ದಡಸೇರಬೇಕು
ಬೇಕುಗಳ ಮೂಟೆಯಲಿ
ಒಳಿತಾಗಿ ಹೊಳೆಯಬೇಕು

                        ಲಕ್ಷೀಸುತ








Saturday 31 December 2022

ಹೊಸತು

         ಹೊಸತು....

ಕಳೆದು ಕಳೆದು ಕಾಲವಾಗಿ
ಬೆಳೆದು ಬೆಳೆದು ಭಾವವಾಗಿ
ತೊಳೆದು ಥಳಥಳಿಸುವ ಮನ
ಉರುಳಿ ಉರುಳಿ ವರುಷವಾಗಿ
ಅನುದಿನಕು ಹರುಷ ತರಲಿ

ಅಭಯ ನಿರ್ಭಯ ಮೂಡಲಿ
ಕಾಲಿಡಲಿ ನವ ಮನ್ವಂತರಕೆ
ಬರಲಿ ಬರಲಿ ಮೂಡಲಿ ನವಕಿರಣ
ಸಹಜ ಸಾಕಾರವಾಗಲಿ ಅರಕೆ ಬಯಕೆ
ಹೊಸನಡೆಗೆ ಹೊಸದರಕಡೆಗೆ ಸಾಗಲಿ

ಬರುವುದು ಬರಲಿ
ತರುವುದು ತರಲಿ
ಕೊಡುವುದ ಕೊಡಲಿ
ಸಂಕಲನ ವ್ಯವಕಲನ
ನೋವುನಲಿವುಗಳ ಸಮ್ಮಿಲನ

ನವಮಾಸಕೆ ನವತುಡಿತಕೆ
ಮನಮಿಡಿತಕೆ ಕಾತುರದಲಿ ಕಾಲಿಡಲಿ
ಶ್ರೀಕಾರ ಆಕಾರ ಮಮಕಾರ
ಬರುವ ಕಾಲದಲಿ ಬಂದುಸೇರಲಿ
ಬದುಕು ಹಸನಾಗಲಿ ಬರುವ ಕಾಲದಿ
                    
   ನವ ವರ್ಷದ ಶುಭಾಶಯಗಳು
  ಸರ್ವೇ ಜನ: ಸುಖಿನೋ ಭವಂತು
 ಶ್ರೀ ಹೆಚ್ ಆರ್ ಭಜಂತ್ರಿ (ಲಕ್ಷ್ಮೀಸುತ)
ಸಹಶಿಕ್ಷಕರು ಜಿಜಿಹೆಚ್ಎಸ್ ಗಜೇಂದ್ರಗಡ

 

ಶಿಲಾಬಾಲೆ.,......

ಬೇಲೂರ ಬಾಲೆ

ಬೇಲೂರ ಬಾಲೆಯರು
ಶಿಲಾಬಾಲೆ ಕಲೆಯಲರಳಿದ 
ಕಲಾರಸಿಕರ ಕರದಲಿ
ಮೆದುವಾದ ಮೃದುವಾಗಿ
ಕಲ್ಲರಳಿ ಹೂವಾಗಿ ಕೈಬೀಸಿ 
ಕರೆಯ ನಿಂತವಳೆ ಕಲಾಬಾಲೆ

ಸೌಂದರ್ಯಕೆ ಸರಿಸಾಟಿ
ಇರದ ಬೆಡಗಿಯರು
ಮುನಿಯುವರು ನಿಮ್ಮಾಟಕೆ
ದರ್ಪಣನಾರಿ ಭಸ್ಮಾಸುರನ ಬೂದಿಗೈದವಳೆ
ಡಮರುಗವ ನುಡಿಸಿ ನೃತ್ಯಗೈದವಳೆ
ಶಿಲಾಬಾಲೆ

ಕೈಬೀಸಿ ರಸಿಕರ ಕರೆದು 
ಮನಸೂರೆಗೊಳುವ ನಿಮ್ಮ ರೂಪು
ಬಲೂ ಅಪರೂಪು ಕಪಿಚೇಷ್ಟೇ 
ಸುಖಭಾಷಿಣಿ ಭಿನ್ನಾಣಗಿತ್ತಿ ಬೆಡಗಿಯರೆ
ಚೆನ್ನಕೇಶವನ ಸೆಳೆದವರೆ
ಕಳೆಬಾಲೆಯರೆ

ಶೃಂಗಾರದ ಹೂವರಳಿ‌ ಘಮಿಸುತಿದೆ
ಶಿಲೆಯರಳಿ‌ ಮದನಿಕೆಯರಾಗಿ
ಮನ್ಮಥನ ಸೆಳೆವ ರತಿಯರಾಗಿ
ಜಗವ ಸೆಳೆವ ಎಳೆವ ತೊಳೆವ
ನಿಮ್ಮಾಟಕೆ ಮುಗ್ದರಾಗಿ‌ ನಿಂತು
ನೋಡುವಂತೆ ಮಾಡುವ ರತಿಬಾಲೆಯರೆ

ಕಥೆಹೇಳುವ ಲತೆಯಾಗುವ
ಗತಕಾಲದ ಆಚಾರವಿಚಾರಗಳ
ಸಾರಸಾರುವ ನಿಮ್ಮ‌ ನೈಜತೆ 
ನಾಡಿಗೆ ಶೋಭಿತೆ ಕಾಲಮೀರಿ ನಿಂತ
ನಿಮ್ಮನು ನೋಡುವ ನಾವೇ ಧನ್ಯರು
ಮೃದುಬಾಲೆಯರೆ

                  ರಚನೆ : ಲಕ್ಷ್ಮೀಸುತ ಗಜೇಂದ್ರಗಡ


ಸಹ್ಯಾದ್ರಿಯೆ....

 1   ಸಹ್ಯಾದ್ರಿಸಿರಿ.......

ಗಿರಿವದನೆ ಸಿರಿವದನೆ
ಹಸಿರವದನೆಯೆ ಜಲವದನೆ
ಫಲವದನೆ ಮೃಗಖಗವದನೆ
ಸಾಲುಮುಗದವಳೆ ಸಸ್ಯಶಾಮಲೆ
ಸಹ್ಯಾದ್ರಿಯೆ ನಿನಗೆ ಕರಮುಗಿವೆ

ನಾಡಮುಕುಟ ಮಣಿಯೆ
ಝರಿತೊರೆ ನದಿಜಲಪಾತಗಳ ಖಣಿಯೆ
ನಯನಮನೋಹರಿ ಹಸಿರರಮಣಿ
ಹೃದಯ ತಂಪೆರೆವ ಸಂಸ್ಕಾರಿಣಿಯೆ
ಮನತಣಿಸುವ ಸಿಂಗಾರಸಿರಿಯೆ ನಿನಗೆ ಕರಮುಗಿವೆ

ನಿತ್ಯನೂತನ ವದನವಿನೂತನ
ಇಳಿಜಾರಿನ ತಿಳಿನೀರಿನ 
ಮುಂಜಾವಿನಮಂಜ ಹನಿಗಳ ಸಿಂಚನ ಮಿಂಚಿನ ಮಣಿ
ನೋಡುವ ನೋಟದಲಿ ಸೆಳೆವ ವಯ್ಯಾರಿಯೆ
ಮಲೆಮಲೆಗಳ ಸುಂದರಿಯೆ ನಿನಗೆ ಕರಮುಗಿವೆ

ಪ್ರಪಾತದ ಚೆಲುವು
ಶಿಖರಕೆ ಮುತ್ತಿಡುವ ನೇಸರನ ನಗೆಯೊ
ಏನು ಸುಧಯೊ ನಿಧಿಯೊ....
ಅರಿಯದಾದೆ ನಾ ಮೂಕವಿಸ್ಮಿತನೊ
ಬಳಕುವ ಸಹ್ಯಾದ್ರಿಯೆ..ನಿನಗೆ ಕರಮುಗಿವೆ

ನಾಡಕುಡಿಗಳ ಚೆಲ್ಲಾಟವ ಕಂಡು ಕಳೆಹೊಂದುವಳೆ 
ನಿನ್ನಾಟಕೆ ನಿನ್ನೋಟಕೆ ಮರುಳಾಗಿ
ಮಂದವಿಸ್ಮಿತರಾಗಿ ಮೈಮರೆವಂತೆ ಮಾಡುವ
ಸಗ್ಗದ‌ರಾಣಿ ಹಿಗ್ಗುತ ಕುಗ್ಗದೆ ಸಾಗುವ
ಮಲೆಪಂಕ್ತಿಗಳ ಬೆಡಗಿ ಸಹ್ಯಾದ್ರಿ ನಿನಗೆ ಕರಮುಗಿವೆ

                                    

    2.   ಹೊಸತು....

ಕಳೆದು ಕಳೆದು ಕಾಲವಾಗಿ
ಬೆಳೆದು ಬೆಳೆದು ಭಾವವಾಗಿ
ತೊಳೆದು ಥಳಥಳಿಸುವ ಮನ
ಉರುಳಿ ಉರುಳಿ ವರುಷವಾಗಿ
ಅನುದಿನಕು ಹರುಷ ತರಲಿ

ಅಭಯ ನಿರ್ಭಯ ಮೂಡಲಿ
ಕಾಲಿಡಲಿ ನವ ಮನ್ವಂತರಕೆ
ಬರಲಿ ಬರಲಿ ಮೂಡಲಿ ನವಕಿರಣ
ಸಹಜ ಸಾಕಾರವಾಗಲಿ ಅರಕೆ ಬಯಕೆ
ಹೊಸನಡೆಗೆ ಹೊಸದರಕಡೆಗೆ ಸಾಗಲಿ

ಬರುವುದು ಬರಲಿ
ತರುವುದು ತರಲಿ
ಕೊಡುವುದ ಕೊಡಲಿ
ಸಂಕಲನ ವ್ಯವಕಲನ
ನೋವುನಲಿವುಗಳ ಸಮ್ಮಿಲನ

ನವಮಾಸಕೆ ನವತುಡಿತಕೆ
ಮನಮಿಡಿತಕೆ ಕಾತುರದಲಿ ಕಾಲಿಡಲಿ
ಶ್ರೀಕಾರ ಆಕಾರ ಮಮಕಾರ
ಬರುವ ಕಾಲದಲಿ ಬಂದುಸೇರಲಿ
ಬದುಕು ಹಸನಾಗಲಿ ಬರುವ ಕಾಲದಿ
                    
   

   3.    ಪಯಣ

ಟವಿ ಮುಂದ ಕುಂತಿದ್ದೆ
ಮನ್ಯಾಗ ಇದ್ದ ಹುಡುಗ
ಗಳಗಳ ಅಳಾಕತ್ತಿತ್ತು
ಮನಿ ಹೆಣ್ಮಕ್ಳೆಲ್ಲಾ ಕಣ್ಣೀರು 
ಹಾಕಕತ್ತಿದ್ದ್ರು ಎದುಕಂದ್ರೇನು
ದಾರಾವಾಹಿಯೊಳಗಿನ ನಾರಿ
ಬಿಟ್ಟುಬಿಡ್ದಾ ದು:ಖಸ್ತಿದ್ಳು
ವ್ಹಾವ್ಹಾ ಎಂತಾ ಜಗತ್ತು ಅಂತೀನಿ
ರೀಲ್ ಗಿದ್ದ ಬೆಲೆ ರೀಯಲ್ಲಗಿಲ್ಲ
ಬೆಲ್ಲದಂತ ಮಾತು ಬೆಲ್ಲದಂತ ಜನ
ಕಲ್ಲಾಗಿ ಕುಂತಾರ
ಏನಿದ್ದ್ರೂ ಅಕ್ಕರೆ ಇಲ್ಲದ ಸಕ್ಕರೆ ಮಂದಿ
ಬರಬಾರದ ಬಂದು
ಇರಬಾರದ್ದು ಇದ್ದು
ಬಿಡಬಾರದ್ದು ಬಿಟ್ಟು 
ಹಿಡಿಬಾರದ್ದು ಹಿಡಿದು
ಕುಡಿಬಾರದ್ದು ಕುಡುದು
ತೊಡಬಾರದ್ದು ತೊಟ್ಟು
ನೋಡುಬಾರದ್ದು ನೋಡಿ
ಮಾಡಬಾರದ್ದು ಮಾಡಿ
ಕಾಲದ ಮಾಯೆಯ‌
ಕಸಬರಗಿಯಾಗಿ 
ಯಾವುದ ಗೂಡಿಸಲಿ 
ಯಾವುದ ಬಳಿಲಿ
ಮುಗಿಯದ ಕಸವನು
ಕೀಳಲು ಹೊರಟ 
ಕೋಡಂಗಿ ಬಾಳಲಿ
ಬಂದ ಬಾಳೆಲೆಯಲಿ
ಬಂದುದ ಉಂಡು
ಹುರುಪಿಲೆ ಬದುಕ ಪಯಣ
ಭರವಸೆಯಲಿ ಸಾಗಿಸಿ
ನಾಕಕೆ ಕೈಚಾಚೊ ನರಮಾನವ



4.    ಬೇಲೂರ ಬಾಲೆ

ಬೇಲೂರ ಬಾಲೆಯರು
ಶಿಲಾಬಾಲೆ ಕಲೆಯಲರಳಿದ 
ಕಲಾರಸಿಕರ ಕರದಲಿ
ಮೆದುವಾದ ಮೃದುವಾಗಿ
ಕಲ್ಲರಳಿ ಹೂವಾಗಿ ಕೈಬೀಸಿ 
ಕರೆಯ ನಿಂತವಳೆ ಕಲಾಬಾಲೆ

ಸೌಂದರ್ಯಕೆ ಸರಿಸಾಟಿ
ಇರದ ಬೆಡಗಿಯರು
ಮುನಿಯುವರು ನಿಮ್ಮಾಟಕೆ
ದರ್ಪಣನಾರಿ ಭಸ್ಮಾಸುರನ ಬೂದಿಗೈದವಳೆ
ಡಮರುಗವ ನುಡಿಸಿ ನೃತ್ಯಗೈದವಳೆ
ಶಿಲಾಬಾಲೆ

ಕೈಬೀಸಿ ರಸಿಕರ ಕರೆದು 
ಮನಸೂರೆಗೊಳುವ ನಿಮ್ಮ ರೂಪು
ಬಲೂ ಅಪರೂಪು ಕಪಿಚೇಷ್ಟೇ 
ಸುಖಭಾಷಿಣಿ ಭಿನ್ನಾಣಗಿತ್ತಿ ಬೆಡಗಿಯರೆ
ಚೆನ್ನಕೇಶವನ ಸೆಳೆದವರೆ
ಕಳೆಬಾಲೆಯರೆ

ಶೃಂಗಾರದ ಹೂವರಳಿ‌ ಘಮಿಸುತಿದೆ
ಶಿಲೆಯರಳಿ‌ ಮದನಿಕೆಯರಾಗಿ
ಮನ್ಮಥನ ಸೆಳೆವ ರತಿಯರಾಗಿ
ಜಗವ ಸೆಳೆವ ಎಳೆವ ತೊಳೆವ
ನಿಮ್ಮಾಟಕೆ ಮುಗ್ದರಾಗಿ‌ ನಿಂತು
ನೋಡುವಂತೆ ಮಾಡುವ ರತಿಬಾಲೆಯರೆ

ಕಥೆಹೇಳುವ ಲತೆಯಾಗುವ
ಗತಕಾಲದ ಆಚಾರವಿಚಾರಗಳ
ಸಾರಸಾರುವ ನಿಮ್ಮ‌ ನೈಜತೆ 
ನಾಡಿಗೆ ಶೋಭಿತೆ ಕಾಲಮೀರಿ ನಿಂತ
ನಿಮ್ಮನು ನೋಡುವ ನಾವೇ ಧನ್ಯರು
ಮೃದುಬಾಲೆಯರೆ

                

                      

 


 



Monday 12 December 2022

ದಲಿತ ಸಾಹಿತ್ಯ ಅಕಾಡೆಮಿ ರಚನೆ

ಅಧ್ಯಕ್ಷರು : ಶ್ರೀ ಹೆಚ್ ಆರ್ ಭಜಂತ್ರಿ ಸಶಿ
                 ಜಿಜಿಹೆಚ್ ಎಸ್ ಗಜೇಂದ್ರಗಡ

ಉಪಾಧ್ಯಕ್ಷರು : ಶ್ರೀಯುತ ಎ.ಜಿ.ಬೂದಿಹಾಳ
                     ಸ.ಶಿ ಜಿಜಿಎಚ್ಎಸ್ ಗ‌,ಗಡ
ಉಪಾಧ್ಯಕ್ಷರು : ಶ್ರೀಯುತ ಎಸ್ ಕೆ ಪೂಜಾರ
                      ಸ.ಶಿ ಜಿಎಚ್ಎಸ್ ಮೆಣಸಗಿ
 
ಕಾರ್ಯದರ್ಶಿ : ಶ್ರೀಯುತ ಶರಣಪ್ಪ.ಬೇವಿನಕಟ್ಟಿ
                                                   ಕವಿಗಳು
ಸಹಕಾರ್ಯದರ್ಶಿ : ಶಂಕರ.ಕಲ್ಲಿಗನೂರ
                            ಕವಿ.ಶಿಕ್ಷಕರು
ಸಹಕಾರ್ಯದರ್ಶಿ : ಶ್ರೀಯುತ ದುರಗಪ್ಪ.ಬಂಕದ
                ಶಿಕ್ಷಕರು ಜಿಎಚ್ಎಸ್ ಹಿರೇಗೊಣ್ಣಾಗರ

ಕೋಶಾಧ್ಯಕ್ಷರು : ಶ್ರೀಯುತ ಎಮ್.ಎಮ್ ಅರಳಿಗಿಡ
              ಶಿಕ್ಷಕರು ಎಸ್ ವಿ ಎಮ್ ಎಚ್ ಎಸ್ ಸೂಡಿ


ಸಂಘಟನಾ ಕಾರ್ಯದರ್ಶಿ : ಶ್ರೀಯುತ ಬಿ ವ್ಹಿ                                                         ಮುನವಳ್ಳಿ
                               ಹಿರಿಯ ಉಪನ್ಯಾಸಕರು
ಸಂಘಟನಾ ಕಾರ್ಯದರ್ಶಿ : ಶ್ರೀಮತಿ ಬಿ ಟಿ                                           ಹೊಸಮನಿ ಶಿಕ್ಷಕಿಯರು


ಸದಸ್ಯರು
೧ ಶ್ರೀಮತಿ ಲಕ್ಷ್ಮೀದೇವಿ ಎಂ ಸಹಶಿಕ್ಷಕಿಯರು
೨ ಶ್ರೀಮತಿ ಶರಣಮ್ಮ ಅಂಗಡಿ ಸಹಶಿಕ್ಷಕಿಯರು
೩ ಶ್ರೀಯುತ ಎಸ್ ಎಸ್ ನರೇಗಲ್ ಸಹಶಿಕ್ಷಕರು
೪ ಶ್ರೀಯುತ ಗಣೇಶ ಗಂಜಿ ಗಜೇಂದ್ರಗಡ